ಪೋಸ್ಟ್‌ಗಳು

ಸಿದ್ದಾಪುರ ಜಾತ್ರೆಯಲ್ಲಿ ಅಪ್ಪುವಿನ ಮೆರವಣಿಗೆ!

ಇಮೇಜ್
ಜಮಖಂಡಿ : ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಶ್ರೀ ಗ್ರಾಮ ದೇವತೆ ಕರೆಮ್ಮದೇವಿ ಜಾತ್ರೆಯಲ್ಲಿ.  ಎಲ್ಲ ವಾದ್ಯ ಮೇಳದಲ್ಲಿ ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಎಲ್ಲರ ಗಮನ ಸೆಳೆಯಿತು. ಗ್ರಾಮದ ಸಮಸ್ತರಿಂದ ಶ್ರೀ ದೇವಿಯ ರಥೋತ್ಸವ ಕೂಡ ಜರುಗಿತು. ವರದಿ. ಪರ್ವ ನ್ಯೂಸ್ ಕನ್ನಡ

ಶ್ರೀಶೈಲದಲ್ಲಿ ನೀರಿಗಾಗಿ ಗಲಾಟೆ ಬಾಗಲಕೋಟೆ ಯುವಕ ಸಾವು !

ಇಮೇಜ್
ಬಾಗಲಕೋಟೆ:  ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರು ಮತ್ತು ಕನ್ನಡಿಗರ ನಡುವೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿತ್ತು. ಘಟನೆಯಲ್ಲಿ ಕರ್ನಾಟಕ ಮೂಲ‌ದ 200ಕ್ಕೂ ಹೆಚ್ಚು ವಾಹನಗಳ ಗ್ಲಾಸ್​ಗಳು ಜಖಂ ಆಗಿವೆ. ಹಲವರು ಗಾಯಗೊಂಡಿದ್ದಾರೆ. ಕುಡಿವ ನೀರಿನ ಬಾಟಲಿ ವಿಚಾರಕ್ಕೆ ಉಂಟಾದ ಜಗಳದಲ್ಲಿ ಆಂಧ್ರ ಮೂಲದ‌ ವ್ಯಾಪಾರಸ್ಥರು ಹಾಗೂ ಸ್ಥಳೀಯರಿಂದ ಕರ್ನಾಟಕ ಭಕ್ತರ ಮೇಲೆ ಹಲ್ಲೆ ನಡೆದಿದೆ. ಲಾಠಿ ಹಾಗೂ ಮಾರಕಾಸ್ತ್ರ ಹಿಡಿದು ಹೊಡೆದಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರ ಮೇಲೆ ಹಲ್ಲೆ ನಡೆದಿದ್ದು, ಕೆಲವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶ್ರೀಶೈಲದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶ್ರೀಶೈಲ ಪೀಠಾಧಿಪತಿ ಶ್ರೀ ಚೆನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ವರದಿ. ಪರ್ವ ನ್ಯೂಸ್ ಕನ್ನಡ.

ಹಾಲು ಕುಡಿದ ಕಲ್ಲು ಬಸವ !

ಇಮೇಜ್
ಜಮಖಂಡಿ : ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಕಲ್ಲು ಬಸವ ಹಾಲು ಕುಡಿದ ಘಟನೆ ನಡೆದಿದೆ.  ಗ್ರಾಮದಲ್ಲಿ ಸಾಯಂಕಾಲ 5 ಗಂಟೆ ಸುಮಾರಿಗೆ ಭಕ್ತರೊಬ್ಬರು ದೇವಸ್ಥಾನಕ್ಕೆ ಹೋಗಿ ಚಮಚದಿಂದ ಹಾಲು ಕುಡಿಸಿದ್ದಾರೆ. ಹಾಗೆಯೇ ಬಸವಣ್ಣ  ಹಾಲು ಕುಡಿಯುತ್ತಿದ್ದಾನೆ ಎಂದು ಸುದ್ದಿ ಹಬ್ಬಿ ಗ್ರಾಮದ ಎಲ್ಲರೂ ವೇಗವಾಗಿ ಬಂದು ಹಾಲು ತಂದು ಕುಡಿಸಲು ಪ್ರಾರಂಭಿಸಿದ್ದಾರೆ.  ವರದಿ : ಪರ್ವ ನ್ಯೂಸ್ ಕನ್ನಡ

ಸಿದ್ದಾಪುರದಲ್ಲಿ ಹಲಗಿ ಹಬ್ಬದ ಕರಪತ್ರ ಪೂಜೆ !

ಇಮೇಜ್
ಜಮಖಂಡಿ : ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇವತ್ತು ಬೆಳಗ್ಗೆ ಹಲಗಿ ಹಬ್ಬದ ಕರಪತ್ರಗಳನ್ನು ಪೂಜೆ ಮಾಡಲಾಯಿತು. ಇದೇ ತಿಂಗಳು 13 ರಂದು ನಡೆಯುತ್ತಿರುವ ಬೃಹತ್ ಹಲಗಿ ಹಬ್ಬವನ್ನು ಸಿದ್ದಾಪುರದ ಚಾವಡಿ ಆವರಣದಲ್ಲಿ ಹಿಂದೂ ಜಾಗರಣಾ ವೇದಿಕೆ ಹಾಗೂ ಗ್ರಾಮದ ವಿವಿಧ ಸಂಘಟನೆಗಳು ಸೇರಿ ನಡೆಸುತ್ತಿದೆ.  ಪ್ರತಿ ಬಾರಿಗಿಂತ ಈ ಬಾರಿ ಬಹಳಷ್ಟು ಅಚ್ಚುಕಟ್ಟಾಗಿ ನೆರವೇರಲಿದೆ ಎಂದು ಯುವಕರು ಮತ್ತು ಸಂಘಟನೆಕಾರರು ತಿಳಿಸಿದ್ದಾರೆ.  ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಾಮದ ಶ್ರೀ ಈರಯ್ಯ ಹಿರೇಮಠ.ಶ್ರೀ ರಾಜು ಕಲಕಂಬ. ರಾಕೇಶ್ ಕ್ಯಾಶನೂರ್ಮಠ. ದಾನೇಶ್ ಕಲಕಂಬ. ರಾಕೇಶ್ ಪೂಜಾರಿ. ಚೇತನ್ ಶೇಡಬಾಳ್. ಸತೀಶ್ ಹಿರೇಮಠ. ಚೇತನ್ ನಿಂಗಸಾನಿ. ಕಿರಣ್ ಜಿರಗಾಳ್. ಶಂಕರ್.ಅಭಿಶೇಕ್. ಹಾಗೂ ಇನ್ನಿತರು ಇದ್ದರು. ವರದಿ : ಸಂಪಾದಕೀಯ ಪರ್ವನ್ಯೂಸ್ ಜಮಖಂಡಿ.

ರಸ್ತೆ ಮಧ್ಯದಲ್ಲಿ ಭಾವಿಗಳಿವೆ ಎಚ್ಚರ !

ಇಮೇಜ್
ಜಮಖಂಡಿ : ಸಾಕಷ್ಟು ಅಭಿವೃದ್ಧಿಗಳನ್ನು ಕಂಡ ಆದರೆ ಒಂದಿಷ್ಟು ಚಿಕ್ಕ ಚಿಕ್ಕ ಕಳಪೆ ಕಾಮಗಾರಿಗಳಿಂದ ಬಹಳಷ್ಟು ಜನರು ತೊಂದರೆಪಡುತ್ತಿದ್ದಾರೆ. ಮೈಗೂರು ರಸ್ತೆಯಲ್ಲಿರುವ ಕಲುತಿಪೆಟ್ರೋಲ್ ಪಂಪ್ ಹತ್ತಿರವಿರುವ ಬೈಪಾಸ್ ರಸ್ತೆ ಹದಗೆಟ್ಟು ಹೋಗಿದೆ.  ಈ ಹಿಂದೆ ನಗರಸಭೆಯವರು ಡ್ರೈನೇಜ್ ಪೈಪ್ಲೈನ್ ಮಾಡುವಾಗ ರಸ್ತೆ ಅಗೆದಿದ್ದರು ಆದರೆ ಅದನ್ನು ವಾಪಸ್ ಮುಚ್ಚುವಾಗ ಕಳಪೆ ಮಟ್ಟದ ಕಾಮಗಾರಿ ಮಾಡಿರುವ ಕಾರಣ ರಸ್ತೆ ಮಧ್ಯದಲ್ಲಿ ಹಲವಾರು ಗುಂಡಿಗಳು ಬಿದ್ದಿವೆ. ಅದಾದ ನಂತರವೂ ಹಲವಾರು ಬಾರಿ ಸರಿ ಪಡಿಸಿದರೂ ಮತ್ತೆ ಮತ್ತೆ ತಗ್ಗುಗಳು ಬೀಳುತ್ತಿವೆ. ಗುಂಡಿಗಳು ಭಾವಿ ತರ ಸ್ವಲ್ಪ ತಗ್ಗು ಜಾಸ್ತಿ ಇರುವದರಿಂದ ಹಲವಾರು ಪ್ರಯಾಣಿಕರು ದ್ವಿಚಕ್ರ ವಾಹನಚಾಲಕರು ಕಿರಿ ಕಿರಿ ಅನುಭವಿಸುತ್ತಿದ್ದಾರೆ.  ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಇದನ್ನು ಗಮನಿಸಿ ಸರಿಪಡಿಸಬೇಕೆಂದು ನಮ್ಮ ನ್ಯೂಸ್ ತಂಡ ಕೇಳಿಕೊಳ್ಳುತ್ತದೆ. ವರದಿ. ಪರ್ವ ನ್ಯೂಸ್ ಜಮಖಂಡಿ. ಕರ್ನಾಟಕ

ನಮ್ಮಭಾರತ್ ಹೊಸ ಅಪ್ಲಿಕೇಶನ್ ಶೀಘ್ರದಲ್ಲೇ ಬಿಡುಗಡೆ !

ಇಮೇಜ್
ಜಮಖಂಡಿ : ನಮ್ಮಬಾರತ್  ಸಂಸ್ಥೆ ಈಗಾಗಲೇ ಹಲವಾರು ಸೇವೆಗಳನ್ನು ಒಂದೇ ಸುರಿನಡೆ ಅಂದರೆ ಒಂದೇ ಅಪ್ಲಿಕೇಶನ್ ಅಲ್ಲಿ ಗ್ರಾಹಕರಿಗೆ ಒದಗಿಸುತ್ತಿದೆ. ಬ್ಯಾಂಕಿನ ವ್ಯವಹಾರ. ಬಿಲ್ ಪೇಮೆಂಟ್ಸ್. ಹಣ ವರ್ಗಾವಣೆ. ಇನ್ನೂ ಅಧಿಕ ಸೇವೆಗಳನ್ನು ನೀಡುತ್ತಿದೆ. ಜೊತೆಗೆ ನಮ್ಮಭಾರತ ಕಂಪನಿಯ ಎಲ್ ಈ ಡಿ ಬಲ್ಬ್. ಮೊಬೈಲ್ ಚಾರ್ಜರ್. ಟಿವಿ ಸೇರಿದಂತೆ ಹಲವಾರು ಪ್ರೊಡಕ್ಟಗಳನ್ನು ಕೂಡ ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದಲ್ಲಿ ನೀಡಿ ಮೇಕ್ ಇನ್ ಇಂಡಿಯಾ ಗೆ ಮಾದರಿಯಾಗಿದೆ.  ◆ ಹೊಸದಾಗಿ ಬರುವ ಅಪ್ಲಿಕೇಶನ್ ಅಲ್ಲಿ ಏನೆಲ್ಲ ಸಿಗಲಿದೆ ? ★ ಯಾವುದೇ ಬ್ಯಾಂಕಿನ ಹಣ ತೆಗೆಯುವದು ★ ಯಾವುದೇ ಬ್ಯಾಂಕಿಗೆ ಹಣ ತುಂಬುವುದು. ★ ಯಾವುದೇ ಬ್ಯಾಂಕಿನ ಹಣ ಪರೀಕ್ಷೆ ★ ಯಾವುದೇ ಬ್ಯಾಂಕಿಗೆ ಹಣ ವರ್ಗಾವಣೆ ★ ಮಿನಿ ATM ಸೌಲಭ್ಯ ★ ಮೊಬೈಲ್ ರೀಚಾರ್ಜ್ ★ ಡಿ ಟಿ ಹೆಚ್ ರೀಚಾರ್ಜ್ ★ ವಿದ್ಯುತ್ ಬಿಲ್ ಪಾವತಿ ★ ವಾಹನ ಇಂಶುರೆನ್ಸ್ ★ ಲೈಫ್ ಇಂಶುರೆನ್ಸ್ ★ ಬಸ್ ಬುಕಿಂಗ್ ★ ಹೋಟಲ್ ಬುಕಿಂಗ್ ★ ಬ್ಯಾಂಕಿನ ಖಾತೆ ತೆಗೆಯುವದು ★ ಮಿನಿ ಸ್ಟೇಟಮೆಂಟ ★ ರೇಷನ್ ಕಾರ್ಡ್ ಮುದ್ರಣ ★ ಗ್ಯಾಸ್ ಬುಕಿಂಗ್ ★ ಆಧಾರ್ ಪೇ ★ ಲ್ಯಾನ್ಡ್ ಫೋನ್ ಬಿಲ್ ಪಾವತಿ ★ ಹೊಸ ವೋಟರ್ ಐಡಿ   ★ ನ್ಯೂಸ್ ಪೋರ್ಟಲ್ ನಿಮ್ಮ ಹಳ್ಳಿಗಳಲ್ಲಿಯೂ ನಮ್ಮಭಾರತ ಸೇವಾ ಕೇಂದ್ರ ಸ್ಥಾಪನೆ ಮಾಡಿ ಅಧಿಕ ಹಣ ಗಳಿಸಿ. ಸಂಪರ್ಕಿಸಿ. 9980976449 ವರದಿ. ಪರ್ವ ನ್ಯೂಸ್ ಕನ್ನಡ

ಬಿಜೆಪಿ ಗ್ರಾಮೀಣ ಮಂಡಲದ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ದಾನಯ್ಯ ಆಯ್ಕೆ !

ಇಮೇಜ್
ಜಮಖಂಡಿ : ತಾಲೂಕಿನ ಸಿದ್ದಾಪುರ ಗ್ರಾಮದ ಉತ್ಸಾಹಿ ಯುವರಾದಂತ ದಾನಯ್ಯ ಪೂಜಾರಿ ಅವರಿಗೆ ಗ್ರಾಮೀಣ ಮಂಡಲದ  ಬಿಜೆಪಿ ಯುವ ಮೋರ್ಚಾ ದ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.  ಜಮಖಂಡಿಯ ರಮಾ ನಿವಾಸದಲ್ಲಿ ನಡೆದ ಬಿಜೆಪಿ ಗ್ರಾಮೀಣ ಮಂಡಲದ ಯುವ ಮೋರ್ಚಾ ಸಭೆಯಲ್ಲಿ ಜಮಖಂಡಿ ತಾಲೂಕಾ ಬಿಜೆಪಿ ಗ್ರಾಮೀಣ ಮಂಡಲದ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಸಾಬು ಗಲಗಲಿ. ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ್ರೀ ಮಹದೇವ ನ್ಯಾಮಗೌಡ. ಹಾಗೂ ಪಕ್ಷದ ಎಲ್ಲ ಪಧಾಧಿಕಾರಿಗಳ ಸಭೆಯಲ್ಲಿ ಶ್ರೀ ದಾನಯ್ಯ ಅವರಿಗೆ ಗ್ರಾಮೀಣ ಮಂಡಲದ ಬಿಜೆಪಿ ಯುವಮೋರ್ಚಾ ಸ್ಥಾನವನ್ನು ನೀಡಿ ಆದೇಶ ಹೊರಡಿಸಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲಿ ಪಕ್ಷವನ್ನು ಬೆಳೆಸಲು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಈ ಮೂಲಕ ಸಿದ್ದಾಪುರ ಗ್ರಾಮದ ದಾನಯ್ಯ ಅವರ ಸ್ನೇಹಿತರಾದ ವಿನೋದ್. ದಾನೇಶ್. ಅಕ್ಷಯ್. ರಾಕೇಶ್. ಸಂಜು. ಸುನಿಲ್ ಹಾಗೂ ಎಲ್ಲ ಹಿರಿಯರು ಕೂಡ ಹರ್ಷ ವ್ಯಕ್ತಪಡಿಸಿದರು. ವರದಿ. ನ್ಯೂಸ್ ಪರ್ವ. ಕನ್ನಡ