ಪೋಸ್ಟ್‌ಗಳು

ನವೆಂಬರ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ATM ಹಣ ತೆಗೆಯುಕೆಯಲ್ಲಿ ಭಾರಿ ಬದಲಾವಣೆ! ಇಲ್ಲಿವೆ ಆ ನಿಯಮಗಳು ಸರಿಯಾಗಿ ಓದಿ.

ಇಮೇಜ್
ನವದೆಹಲಿ : ಆನ್ ಲೈನ್ ಬ್ಯಾಂಕ್ ವಹಿವಾಟು ಮತ್ತು ಎಟಿಎಂ ನಗದು ಹಿಂತೆಗೆತಕ್ಕೆ ಸಂಬಂಧಿಸಿದ ಹಲವು ನಿಯಮಗಳು ಇಂದಿನಿಂದ (ಡಿಸೆಂಬರ್ 1, 2020) ಬದಲಾಗಲಿದೆ. ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸಿಸ್ಟಮ್ (ಆರ್ ಟಿಜಿಎಸ್) ಗೆ ಹೊಸ ಟೈಮಿಂಗ್ ಸ್ಟೈಮಿಂಗ್ ಗಳು ಇರಲಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ತನ್ನ ಗ್ರಾಹಕರಿಗೆ ಎಟಿಎಂನಲ್ಲಿ ಒನ್ ಟೈಮ್ ಪಾಸ್ ವರ್ಡ್ (ಒಟಿಪಿ) ಆಧಾರಿತ ನಗದು ಹಿಂತೆಗೆಯುವ ಸೌಲಭ್ಯವನ್ನು ಪರಿಚಯಿಸುತ್ತದೆ. ಡಿಸೆಂಬರ್ 1ರಿಂದ ಬ್ಯಾಂಕ್ ಗಳು ಜಾರಿಗೆ ತಂದಿರುವ ಕೆಲವು ಹೊಸ ನಿಯಮಗಳು ಇಲ್ಲಿವೆ. ಇಂದಿನಿಂದ ಪಿಎನ್ ಬಿ ತನ್ನ ಗ್ರಾಹಕರಿಗೆ ಒಟಿಪಿ ಆಧಾರಿತ ನಗದು ಹಿಂಪಡೆಯುವ ಸೌಲಭ್ಯವನ್ನು ಜಾರಿಗೆ ತರಲಿದೆ. ಪಿಎನ್ ಬಿ 2.0 (ಪಿಎನ್ ಬಿ, ಇಓಬಿಸಿ, ಇಯುಎನ್‌ಐ) ಎಟಿಎಂಗಳಿಂದ 2020ರ ಡಿಸೆಂಬರ್ 1ರಿಂದ ರಾತ್ರಿ 8 ರಿಂದ ಬೆಳಗ್ಗೆ 8 ಗಂಟೆಯವರೆಗೆ 10,000 ರೂ.ಗಿಂತ ಹೆಚ್ಚು ಹಣ ಹಿಂತೆಗೆದುಕೊಳ್ಳುವ ಎಟಿಎಂಗಳು ಈಗ ಒಟಿಪಿ ಆಧಾರಿತವಾಗಿರುತ್ತದೆ. ಪಿಎನ್ ಬಿ ಗ್ರಾಹಕರಿಗೆ ಈ ರಾತ್ರಿ ವೇಳೆಯಲ್ಲಿ 10 ಸಾವಿರ ರೂ.ಗಿಂತ ಹೆಚ್ಚು ಹಣ ಡ್ರಾ ಮಾಡಲು ತಮ್ಮ ನೋಂದಾಯಿತ ಮೊಬೈಲ್ ಫೋನ್ ನಲ್ಲಿ ಕಳುಹಿಸಿರುವ ಒಟಿಪಿ ಬೇಕಾಗುತ್ತದೆ. ವರದಿ. ಪರ್ವ ನ್ಯೂಸ್ ಕನ್ನಡ

ಗ್ರಾಮ ಪಂಚಾಯಿತಿ ಎಲೆಕ್ಷನ್ ಫಿಕ್ಸ್ !

ಇಮೇಜ್
ಬೆಂಗಳೂರು : ತೀವ್ರ ಕೂತುಹಲ ಕೆರಳಿಸಿದ್ದ ರಾಜ್ಯದ ಗ್ರಾಮಪಂಚಾಯಿತಿ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಡಿಸೆಂಬರ್ 22 ಮತ್ತು 27 ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಿದ್ದು, ರಾಜ್ಯದಲ್ಲಿ 2 ಹಂತಗಳಲ್ಲಿ ಒಟ್ಟು 5,762 ಗ್ರಾಮಪಂಚಾಯಿತಿಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿದೆ. ರಾಜ್ಯದ ಒಟ್ಟು 5,762 ಗ್ರಾಮಪಂಚಾಯಿತಿಗಳಿಗೆ ಡಿಸೆಂಬರ್ 22 ಮತ್ತು 27 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಘೋಷಣೆ ಮಾಡಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಕೋವಿಡ್-19 ನಿಯಮ ಕಡ್ಡಾಯ ಮಾಡಲಾಗಿದ್ದು, ಕೆಲವು ಕಡೆ ಮತದಾನಕ್ಕೆ ಇವಿಎಂ ಬಳಸಲು ನಿರ್ಧರಿಸಲಾಗಿದೆ. ವರದಿ. ಪರ್ವ ನ್ಯೂಸ್ ಕನ್ನಡ

ವಯಸ್ಸಿಗೆ ಬಂದ ಹುಡುಗಿ ಇನ್ಮುಂದೆ ತನಗೆ ಇಷ್ಟ ಆದ ಹುಡುಗನ ಜೊತೆ ಇರಬಹುದು. ಹೈಕೋರ್ಟ್ ತೀರ್ಪು!

ಇಮೇಜ್
ನವದೆಹಲಿ(ನ.26): ಇಪ್ಪತ್ತು ವರ್ಷದ ಯುವತಿಯನ್ನು ಆಕೆಯ ಗಂಡನೊಂದಿಗೆ ಮತ್ತೆ ಸೇರಿಸುತ್ತಾ, ವಯಸ್ಸಿಗೆ ಬಂದ ಹೆಣ್ಣು ಮಗಳು ತನಗಿಷ್ಟವಾದವರೊಂದಿಗೆ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯ ಹೊಂದಿದ್ದಾಳೆಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಸದ್ಯ ಬಿಜೆಪಿ ನೇತೃತ್ವದ ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಲಿರುವ ಲವ್ ಜಿಹಾದ್ ವಿರೋಧಿ ಕಾನೂನು ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಇದರೊಂದಿಗೇ ವಯಸ್ಕ ಮಹಿಳೆ ತಾನು ಆಯ್ಕೆ ಮಾಡುವ ಯುವಕನೊಂದಿಗೆ ಮದುವೆಯಾಗುವ ಸ್ವಾತಂತ್ರ್ಯದ ಬಗ್ಗೆಯೂ ಚರ್ಚೆ ಹುಟ್ಟಿಕೊಳ್ಳಲಾರಂಭಿಸಿದೆ. ಹೀಗಿರುವಾಗಲೇ ನ್ಯಾಯಮೂರ್ತಿ ವಿಪಿನ್ ಸಿಂಗ್ ಹಾಗೂ ರಜನೀಶ್ ಭಟ್ನಾಕರ್ ನೇತೃತ್ವದ ದ್ವಿಸದಸ್ಯ ಪೀಠ ಇಂತಹುದ್ದೊಂದು ತೀರ್ಪು ನೀಡಿರುವುದು ಭಾರೀ ಸಂಚಲನ ಮೂಡಿಸಿದೆ. ಏನಿದು ಪ್ರಕರಣ? ಸುಲೇಖ ಹೆಸರಿನ ಇಪ್ಪತ್ತು ವರ್ಷದ ಯುವತಿಯನ್ನು ಬಬ್ಲೂ ಎಂಬಾತ ಕಿಡ್ನಾಪ್ ಮಾಡಿದ್ದಾನೆ ಹಾಗೂ ಆಕೆ ಅಪ್ರಾಪ್ತಳೆಂದು ದೂರು ನೀಡಿದ್ದರು. ಆದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸುಲೇಖ ವಿಚಾರಣೆ ನಡೆಸಿದಾಗ ತಾನು ಮನೆ ಬಿಟ್ಟು ತೆರಳಿದ್ದ ವೇಳೆ ತಾನೊಬ್ಬ ವಯಸ್ಕ ಹೆಣ್ಣಾಗಿದ್ದೆ. ಅಲ್ಲದೇ ಪರಸ್ಪರ ಇಷ್ಟಪಟ್ಟು ತಾವಿಬ್ಬರು ಮದುವೆಯಾಗಿಯೂ ತಿಳಿಸಿದ್ದಾಳೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸುಲೇಖರನ್ನು ಬಬ್ಲೂ ಜೊತೆಗೆ ಕಳುಹಿಸಿಕೊಟ್ಟಿದೆ. ಅಲ್ಲದೇ ಇಂತಹುದ್ದೊಂದು ಮಹತ್ವದ ತೀರ್ಪು ನೀಡಿದೆ. ವರದಿ : ಪರ್ವ ನ್ಯೂಸ್ ಕನ್ನಡ

ಗೂಗಲ್ ಪೆ ಇನ್ಮುಂದೆ ಉಚಿತ ಅಲ್ಲ!

ಇಮೇಜ್
ನವದೆಹಲಿ, ನವೆಂಬರ್ 25: ಜನಪ್ರಿಯ ಹಣ ಪಾವತಿ ಅಪ್ಲಿಕೇಶನ್ ಗೂಗಲ್ ಪೇ ಇನ್ಮುಂದೆ ಪೂರ್ತಿಯಾಗಿ ನಿಮಗೆ ಉಚಿತವಾಗಿ ಲಭ್ಯವಿರುವುದಿಲ್ಲ. ಬದಲಾಗಿ 2021ರಿಂದ ಶುಲ್ಕ ವಿಧಿಸುವ ಕಾರ್ಯಕ್ಕೆ ಮುಂದಾಗಿದೆ. ಮುಂದಿನ ವರ್ಷ ಜನವರಿಯಿಂದ ವೆಬ್ ಅಪ್ಲಿಕೇಶನ್ ಸೈಟ್ ಇನ್ನು ಮುಂದೆ ಕಾರ್ಯನಿರ್ವಹಿಸುವುದಿಲ್ಲ ಎಂದು ಬಳಕೆದಾರರಿಗೆ ತಿಳಿಸಿರುವ ಗೂಗಲ್ ನೋಟಿಸ್ ನೀಡಿದೆ. 2021 ರ ಆರಂಭದಿಂದಲೂ ಬಳಕೆದಾರರು ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು pay.google.com ಅನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಗೂಗಲ್ ಪೇ ಹೇಳಿದೆ. ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಒಬ್ಬರು ಹೊಸ Google Pay ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ವರದಿ: ಪರ್ವ ನ್ಯೂಸ್ ಕನ್ನಡ

ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯ ಮತದಾನ.ಮತ ಎಣಿಕೆಗೆ ಚುನಾವಣೆ ಆಯೋಗದಿಂದ ಕ್ಯಾಮರಾ ಕಂಗಾವಲು !

ಇಮೇಜ್
ಬೆಂಗಳೂರು : ರಾಜ್ಯದಲ್ಲಿ ಎರಡು ಹಂತದ ಗ್ರಾಮ ಪಂಚಾಯ್ತಿ ಚುನಾವಣೆಗೆ ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ಸದ್ಯದಲ್ಲಿಯೇ ಚುನಾವಣಾ ದಿನಾಂಕ ಕೂಡ ಪ್ರಕಟಿಸಲಿದೆ. ಇಂತಹ ಗ್ರಾಮ ಪಂಚಾಯ್ತಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಂತ ಉದ್ದೇಶದೊಂದಿಗೆ, ಚುನಾವಣಾ ಆಯೋಗ ಗ್ರಾಮ ಪಂಚಾಯ್ತಿ ಚುನಾವಣೆಯ ಮತದಾನ, ಮತಏಣಿಕೆ ಮೇಲೆ ಕ್ಯಾಮರಾ ಕಣ್ಗಾವಲು ಇರಿಸಿದೆ. ಈ ಕುರಿತಂತೆ ರಾಜ್ಯ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ಚುನಾವಣಾ ಆಯೋಗ, ಗ್ರಾಮ ಪಂಚಾಯ್ತಿ ಚುನಾವಣೆಯ ಮತದಾನದಂದು, ಮತ ಏಣಿಕೆಯಂದು ವೀಡಿಯೋ ಚಿತ್ರೀಕರಣಕ್ಕೆ ವೀಡಿಯೋ ಪೋಟೋ ಗ್ರಾಫರ್ ನೇಮಕ ಮಾಡಿಕೊಳ್ಳುವಂತೆ ಸೂಚಿಸಿದೆ. ಅಲ್ಲದೇ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ ಮಾಡುವಂತ ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ. ಅಂದಹಾಗೇ ರಾಜ್ಯದ ಗ್ರಾಮ ಪಂಚಾಯ್ತಿ ಚುನಾವಣೆಯ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಕಡ್ಡಾಯವಾಗಿ ವೀಡಿಯೋ ಚಿತ್ರೀಕರಣ ಮಾಡುಲು, ವೀಡಿಯೋ ಪೋಟೋಗ್ರಾಫರ್ ಗಳಿಗೆ ದೈನಂದಿನ ಭತ್ಯೆ ಇತರೆ ಖರ್ಚುಗಳಿಗೆ 1500 ರೂ ನೀಡುವಂತೆಯೂ ಸೂಚನೆ ನೀಡಿದೆ. ವರದಿ : ಪರ್ವ ನ್ಯೂಸ್ ಕನ್ನಡ

ಮುಗ್ಧ ಜನರನ್ನು ವಂಚಿಸಿದ ವೀರಬಥಿರಾ ಫ್ರಾಡ್ ಕಂಪನಿ ಏನಿದು ಮಹಾಮೋಸ !

ಇಮೇಜ್
  ಹುಬ್ಬಳ್ಳಿ-ಧಾರವಾಡ   ದಕ್ಷಿಣ ಕನ್ನಡ   ಉಡುಪಿ ಜಿಲ್ಲೆ Play Mute Loaded: 0% Progress: 0% Fullscreen ಮುಗ್ಧ ಜನರನ್ನು ವಂಚಿಸಿದ ವೀರಬಥಿರಾ ಫ್ರಾಡ್ ಕಂಪನಿ ಏನಿದು ಮಹಾಮೋಸ ! ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿದೆ ಇನ್ನೊಂದು ನಕಲಿ ಕಂಪನಿ, ಮುಗ್ಧ ಜನರನ್ನು ಯಾಮಾರಿಸಿ ನಕಲಿ ವೆಬ್ಸೈಟ್ ಗಳನ್ನ ಸೃಷ್ಟಿಸಿಕೊಂಡು ಜನರ ಹಣವನ್ನು ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಮುಗ್ಧ ಜನರನ್ನು ಭೇಟಿಯಾದ ತಂಡ ಮೊದಲು ಮಾಡುವುದು ಇಷ್ಟೇ, ನಮ್ಮ ಕಂಪನಿಗೆ 3000 ಸಾವಿರ ಕೋಟಿ ಟ್ರಾಂಜಾಕ್ಷನ್ ತೋರಿಸಬೇಕು, ನಮ್ಮ ಕಂಪನಿಯಿಂದ ಟೆಕ್ಸ್ ಟೈಲ್ ಯಾಲಕ್ಕಿ ವ್ಯಾಪಾರ, ಇನ್ನೂ ಹತ್ತು ಹಲವು ವಿಚಾರಗಳನ್ನ ಹೇಳಿ ಜನರನ್ನು ದಾರಿ ತಪ್ಪಿಸುತ್ತಾರೆ. ಇನ್ನು ಕೆಲವರು ನಮ್ಮ ಕಂಪನಿಗೆ 80 ಬರುವ ಲಾಭಾಂಶ ನಮ್ಮ ಎಲ್ಲಾ ಸದಸ್ಯರಿಗೆ ನಾವು ಕೊಡುತ್ತೇವೆ ಎಂದು ಮೋಟಿವೇಶನ್ ಸ್ಪೀಚ್ ಮಾಡುತ್ತಾರೆ. ಇದನ್ನು ನಂಬಿದ ಮುಗ್ಧ ಜನರು ಸಾಲಸೂಲ ಮಾಡಿ ಈ ಕಂಪನಿಗೆ ಹಣ ಹಾಕುತ್ತಾರೆ. ಒಂದು ವಾರ ಅಥವಾ ಹದಿನೈದು ದಿನ ನಿಮ್ಮ ಅಕೌಂಟಿಗೆ ಹಣ ಬರುತ್ತೆ ಅದು ಹೇಗೆ ಗೊತ್ತಾ !? ಸಾವಿರದ ಇನ್ನೂರು ರೂಪಾಯಿ ಕೊಟ್ಟವರಿಗೆ ಪ್ರತಿದಿನ 20 ರೂಪಾಯಿ ,5000 ಕೊಟ್ಟವರಿಗೆ ಪ್ರತಿದಿನ 75 ರೂಪಾಯಿ ಸಿಗುತ್ತದೆ, 10000 ಸಾವಿರ ಹಾಕಿದವರಿಗೆ ಪ್ರತಿದಿನ 150 ಸಿಗುತ್ತದೆ,25000ಸಾವಿರ ಹಾಕಿದವರಿಗೆ 375 ರೂಪಾಯಿ ಹಾಕುತ್ತೇನೆ ಎಂದು ಹೀಗೆ ಪ್ಲಾನ್ ಕೊಡುತ್ತಾರೆ. ನಂತರ ಎ...

ಐಪಿಎಲ್‌ ಮುಗಿಸಿ ಸ್ವದೇಶಕ್ಕೆ ತೆರಳಿದ ಬೆನ್ನಲ್ಲೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಎಬಿಡಿ !

ಇಮೇಜ್
  2020ರ ಐಪಿಎಲ್‌ ಟೂರ್ನಿ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬೆನ್ನಲ್ಲೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ಆರ್‌ಸಿಬಿ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್ ತಮಗೆ ಮೂರನೇ ಮಗು ಜನಿಸಿರುವ ಸಿಹಿ ಸುದ್ದಿಯನ್ನು ತಿಳಿಸಿದ್ದಾರೆ. ಹೈಲೈಟ್ಸ್‌: ಎಬಿ ಡಿವಿಲಿಯರ್ಸ್, ಡೇನಿಯಲ್‌ ದಂಪತಿಗೆ ಮೂರನೇ ಮಗು ಜನನ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಷಯ ಬಹಿರಂಗಪಡಿಸಿದ ಆರ್‌ಸಿಬಿ ಆಟಗಾರ ಹೊಸದಾಗಿ ಜನಿಸಿರುವ ಮಗುವಿನ ಹೆಸರು ಯೆಂಟೆ ಡಿವಿಲಿಯರ್ಸ್ ಹೊಸದಿಲ್ಲಿ:  ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮುಗಿಸಿಕೊಂಡು ಸ್ವದೇಶಕ್ಕೆ ತೆರಳಿದ ಬಳಿಕ  ರಾಯಲ್‌ ಚಾಲೆಂಜರ್ಸ್ ಬೆಂಗಳೂರು  ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಎಬಿ ಡವಿಲಿಯರ್ಸ್ ಹಾಗೂ ಅವರ ಪತ್ನಿ ಡೇನಿಯಲ್‌ ಮೂರನೇ ಮಗು(ಹೆಣ್ಣು)ವಿಗೆ ಸ್ವಾಗತವನ್ನು ಕೋರಿದರು. ಇದಕ್ಕೂ ಮುನ್ನ ಎಬಿಡಿ ಅಬ್ರಹಾಂ ಡಿ ವಿಲಿಯರ್ಸ್ ಹಾಗೂ ಜಾನ್‌ ರಿಚರ್ಡ್‌ ಡಿ ವಿಲಿಯರ್ಸ್ ಇಬ್ಬರು ಗಂಡು ಮಕ್ಕಳಿಗೆ ತಂದೆಯಾಗಿದ್ದರು. ದಕ್ಷಿಣ ಆಫ್ರಿಕಾ  ಮಾಜಿ ನಾಯಕ ಎಬಿ ಡಿವಿಲಿಯರ್ಸ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 12 ಮಿಲಿಯನ್‌ಕ್ಕಿಂತಲೂ ಅಧಿಕ ಫಾಲೋವರ್ಸ್‌ಗೆ ತಮಗೆ ಮೂರನೇ ಮಗುವಾಗಿರುವ ವಿಚಾರವನ್ನು ಬಹಿರಂಗಪಡಿಸಿದರು. ಪತ್ನಿ ಹಾಗೂ ಹೊಸದಾಗಿ ಜನಿಸಿರುವ ಮಗಳೊಂದಿಗಿನ ಫೋಟೊವನ್ನು  ಎಬಿ ಡಿವಿಲಿಯರ್ಸ್  ಪೋಸ್ಟ್‌ ಮಾಡಿದ್ದಾರೆ. ಮಗಳಿಗೆ ಇಟ್ಟಿರುವ 'ಯೆಂಟೆ ...

ಶೇರ್ಚಾಟ್ಆನ್ಲೈನಲ್ಲಿ ಎದೆ ತುಂಬಿ ಹಾಡಿರಿ ಸೀಸನ್ - 02 ಧ್ವನಿ ಪರೀಕ್ಷೆ !

ಇಮೇಜ್
ಕರ್ನಾಟಕ:  tik tok ಬ್ಯಾನ್ ಅದಾಗಿನಿಂದಲೂ ಭಾರತದ ಒಂದಿಷ್ಟು ಅಪ್ಲಿಕೇಶನಗಳಲ್ಲಿ ಶೇರ್ಚಾಟ್ ಅಪ್ಲಿಕೇಶನ್ ಗೆ ಬಹಳಷ್ಟು ಬೇಡಿಕೆ ಬಂದಿದೆ. ಅದರಲ್ಲಿ ಚಾಟ್ ರೂಮ್ ವ್ಯವಸ್ಥೆಯ ಮುಖಾಂತರ ಹಲವಾರು ಜನ ಒಟ್ಟಿಗೆ ಮಾತನಾಡುವ ವಿಶೇಷತೆ ಹೊಂದಿರುವ ಈ ಅಪ್ಲಿಕೇಶನ್ ಅಲ್ಲಿ ಒಂದು ಗಾಯನ ಕಾರ್ಯಕ್ರಮ ಪ್ರಾರಂಭವಾಗಿದೆ. ಅದುವೇ  ETH ತಂಡ ಅರ್ಪಿಸುವ  ಎದೆ ತುಂಬಿ ಹಾಡಿರಿ ಸೀಸನ್ -02 ಈಗಾಗಲೇ ಮೊದಲ ಭಾಗ ಬಹಳ ಅದ್ಭುತವಾಗಿ ಮುಗಿಸಿ 02 ನೇ ಹಂತಕ್ಕೆ ಕಾಲಿಟ್ಟಿದ್ದು . ಬಹಳಷ್ಟು ಗಾಯಕರಿಗೆ ಒಳ್ಳೆಯ ವೇದಿಕೆ ಕಲ್ಪಿಸಿ ವಿಜೇತರಿಗೆ ಬಹುಮಾನಗಳನ್ನು ಕೊಡುವುದರ ಮುಖಾಂತರ ಗಾಯಕರನ್ನು ಬೆಳೆಸುವ ಪ್ರಯತ್ನ ಮಾಡುತ್ತಿರುವ ETH  ತಂಡಕ್ಕೆ ಎಲ್ಲಿಲ್ಲದ ಶುಭಾಶಯಗಳ ಮಹಾಪೂರವೇ ಬರುತ್ತಿದೆ.ಎಂದು ಸಂಸ್ಥೆಯ ನಿರ್ದೇಶಕರಾದ  ಪ್ರದೀಪ್ ಹಿರೇಮಠ್ ಅವರು ತಿಳಿಸಿದ್ದಾರೆ. ಅದರಲ್ಲಿ ಹೆಸರಾಂತ ಹಾಸ್ಯ ಚಿತ್ರನಟಿ ಪಂಕಜ ರವಿಶಂಕರ್ ಮತ್ತು ಹಾಸ್ಯ ಕಲಾವಿದ ಬಸು ಹಿರೇಮಠ ಅವರು ಕೂಡ ಶುಭಾಷಯ ಕೋರಿದ್ದಾರೆ .