ಶೇರ್ಚಾಟ್ಆನ್ಲೈನಲ್ಲಿ ಎದೆ ತುಂಬಿ ಹಾಡಿರಿ ಸೀಸನ್ - 02 ಧ್ವನಿ ಪರೀಕ್ಷೆ !

ಕರ್ನಾಟಕ: tik tok ಬ್ಯಾನ್ ಅದಾಗಿನಿಂದಲೂ ಭಾರತದ ಒಂದಿಷ್ಟು ಅಪ್ಲಿಕೇಶನಗಳಲ್ಲಿ ಶೇರ್ಚಾಟ್ ಅಪ್ಲಿಕೇಶನ್ ಗೆ ಬಹಳಷ್ಟು ಬೇಡಿಕೆ ಬಂದಿದೆ. ಅದರಲ್ಲಿ ಚಾಟ್ ರೂಮ್ ವ್ಯವಸ್ಥೆಯ ಮುಖಾಂತರ ಹಲವಾರು ಜನ ಒಟ್ಟಿಗೆ ಮಾತನಾಡುವ ವಿಶೇಷತೆ ಹೊಂದಿರುವ ಈ ಅಪ್ಲಿಕೇಶನ್ ಅಲ್ಲಿ ಒಂದು ಗಾಯನ ಕಾರ್ಯಕ್ರಮ ಪ್ರಾರಂಭವಾಗಿದೆ. ಅದುವೇ  ETH ತಂಡ ಅರ್ಪಿಸುವ  ಎದೆ ತುಂಬಿ ಹಾಡಿರಿ ಸೀಸನ್ -02 ಈಗಾಗಲೇ ಮೊದಲ ಭಾಗ ಬಹಳ ಅದ್ಭುತವಾಗಿ ಮುಗಿಸಿ 02 ನೇ ಹಂತಕ್ಕೆ ಕಾಲಿಟ್ಟಿದ್ದು . ಬಹಳಷ್ಟು ಗಾಯಕರಿಗೆ ಒಳ್ಳೆಯ ವೇದಿಕೆ ಕಲ್ಪಿಸಿ ವಿಜೇತರಿಗೆ ಬಹುಮಾನಗಳನ್ನು ಕೊಡುವುದರ ಮುಖಾಂತರ ಗಾಯಕರನ್ನು ಬೆಳೆಸುವ ಪ್ರಯತ್ನ ಮಾಡುತ್ತಿರುವ ETH  ತಂಡಕ್ಕೆ ಎಲ್ಲಿಲ್ಲದ ಶುಭಾಶಯಗಳ ಮಹಾಪೂರವೇ ಬರುತ್ತಿದೆ.ಎಂದು ಸಂಸ್ಥೆಯ ನಿರ್ದೇಶಕರಾದ  ಪ್ರದೀಪ್ ಹಿರೇಮಠ್ ಅವರು ತಿಳಿಸಿದ್ದಾರೆ. ಅದರಲ್ಲಿ ಹೆಸರಾಂತ ಹಾಸ್ಯ ಚಿತ್ರನಟಿ ಪಂಕಜ ರವಿಶಂಕರ್ ಮತ್ತು ಹಾಸ್ಯ ಕಲಾವಿದ ಬಸು ಹಿರೇಮಠ ಅವರು ಕೂಡ ಶುಭಾಷಯ ಕೋರಿದ್ದಾರೆ . 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ