ವಯಸ್ಸಿಗೆ ಬಂದ ಹುಡುಗಿ ಇನ್ಮುಂದೆ ತನಗೆ ಇಷ್ಟ ಆದ ಹುಡುಗನ ಜೊತೆ ಇರಬಹುದು. ಹೈಕೋರ್ಟ್ ತೀರ್ಪು!
ನವದೆಹಲಿ(ನ.26): ಇಪ್ಪತ್ತು ವರ್ಷದ ಯುವತಿಯನ್ನು ಆಕೆಯ ಗಂಡನೊಂದಿಗೆ ಮತ್ತೆ ಸೇರಿಸುತ್ತಾ, ವಯಸ್ಸಿಗೆ ಬಂದ ಹೆಣ್ಣು ಮಗಳು ತನಗಿಷ್ಟವಾದವರೊಂದಿಗೆ ಎಲ್ಲಿ ಬೇಕಾದರೂ ವಾಸಿಸುವ ಸ್ವಾತಂತ್ರ್ಯ ಹೊಂದಿದ್ದಾಳೆಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.
ಸದ್ಯ ಬಿಜೆಪಿ ನೇತೃತ್ವದ ಉತ್ತರ ಪ್ರದೇಶದಲ್ಲಿ ಜಾರಿಗೊಳಿಸಲಿರುವ ಲವ್ ಜಿಹಾದ್ ವಿರೋಧಿ ಕಾನೂನು ಸದ್ಯ ದೇಶದೆಲ್ಲೆಡೆ ಸದ್ದು ಮಾಡುತ್ತಿದೆ. ಇದರೊಂದಿಗೇ ವಯಸ್ಕ ಮಹಿಳೆ ತಾನು ಆಯ್ಕೆ ಮಾಡುವ ಯುವಕನೊಂದಿಗೆ ಮದುವೆಯಾಗುವ ಸ್ವಾತಂತ್ರ್ಯದ ಬಗ್ಗೆಯೂ ಚರ್ಚೆ ಹುಟ್ಟಿಕೊಳ್ಳಲಾರಂಭಿಸಿದೆ. ಹೀಗಿರುವಾಗಲೇ ನ್ಯಾಯಮೂರ್ತಿ ವಿಪಿನ್ ಸಿಂಗ್ ಹಾಗೂ ರಜನೀಶ್ ಭಟ್ನಾಕರ್ ನೇತೃತ್ವದ ದ್ವಿಸದಸ್ಯ ಪೀಠ ಇಂತಹುದ್ದೊಂದು ತೀರ್ಪು ನೀಡಿರುವುದು ಭಾರೀ ಸಂಚಲನ ಮೂಡಿಸಿದೆ.
ಏನಿದು ಪ್ರಕರಣ?
ಸುಲೇಖ ಹೆಸರಿನ ಇಪ್ಪತ್ತು ವರ್ಷದ ಯುವತಿಯನ್ನು ಬಬ್ಲೂ ಎಂಬಾತ ಕಿಡ್ನಾಪ್ ಮಾಡಿದ್ದಾನೆ ಹಾಗೂ ಆಕೆ ಅಪ್ರಾಪ್ತಳೆಂದು ದೂರು ನೀಡಿದ್ದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಸುಲೇಖರನ್ನು ಬಬ್ಲೂ ಜೊತೆಗೆ ಕಳುಹಿಸಿಕೊಟ್ಟಿದೆ. ಅಲ್ಲದೇ ಇಂತಹುದ್ದೊಂದು ಮಹತ್ವದ ತೀರ್ಪು ನೀಡಿದೆ.
ವರದಿ : ಪರ್ವ ನ್ಯೂಸ್ ಕನ್ನಡ
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ