ಪೋಸ್ಟ್‌ಗಳು

ಮಾರ್ಚ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೀಶೈಲದಲ್ಲಿ ನೀರಿಗಾಗಿ ಗಲಾಟೆ ಬಾಗಲಕೋಟೆ ಯುವಕ ಸಾವು !

ಇಮೇಜ್
ಬಾಗಲಕೋಟೆ:  ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಬುಧವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಸ್ಥಳೀಯರು ಮತ್ತು ಕನ್ನಡಿಗರ ನಡುವೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿತ್ತು. ಘಟನೆಯಲ್ಲಿ ಕರ್ನಾಟಕ ಮೂಲ‌ದ 200ಕ್ಕೂ ಹೆಚ್ಚು ವಾಹನಗಳ ಗ್ಲಾಸ್​ಗಳು ಜಖಂ ಆಗಿವೆ. ಹಲವರು ಗಾಯಗೊಂಡಿದ್ದಾರೆ. ಕುಡಿವ ನೀರಿನ ಬಾಟಲಿ ವಿಚಾರಕ್ಕೆ ಉಂಟಾದ ಜಗಳದಲ್ಲಿ ಆಂಧ್ರ ಮೂಲದ‌ ವ್ಯಾಪಾರಸ್ಥರು ಹಾಗೂ ಸ್ಥಳೀಯರಿಂದ ಕರ್ನಾಟಕ ಭಕ್ತರ ಮೇಲೆ ಹಲ್ಲೆ ನಡೆದಿದೆ. ಲಾಠಿ ಹಾಗೂ ಮಾರಕಾಸ್ತ್ರ ಹಿಡಿದು ಹೊಡೆದಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರ ಮೇಲೆ ಹಲ್ಲೆ ನಡೆದಿದ್ದು, ಕೆಲವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶ್ರೀಶೈಲದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಶ್ರೀಶೈಲ ಪೀಠಾಧಿಪತಿ ಶ್ರೀ ಚೆನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಪೊಲೀಸ್​ ಬಂದೋಬಸ್ತ್​ ಮಾಡಲಾಗಿದೆ. ವರದಿ. ಪರ್ವ ನ್ಯೂಸ್ ಕನ್ನಡ.

ಹಾಲು ಕುಡಿದ ಕಲ್ಲು ಬಸವ !

ಇಮೇಜ್
ಜಮಖಂಡಿ : ತಾಲ್ಲೂಕಿನ ಸಿದ್ದಾಪುರ ಗ್ರಾಮದ ಬಸವಣ್ಣನ ದೇವಸ್ಥಾನದಲ್ಲಿ ಕಲ್ಲು ಬಸವ ಹಾಲು ಕುಡಿದ ಘಟನೆ ನಡೆದಿದೆ.  ಗ್ರಾಮದಲ್ಲಿ ಸಾಯಂಕಾಲ 5 ಗಂಟೆ ಸುಮಾರಿಗೆ ಭಕ್ತರೊಬ್ಬರು ದೇವಸ್ಥಾನಕ್ಕೆ ಹೋಗಿ ಚಮಚದಿಂದ ಹಾಲು ಕುಡಿಸಿದ್ದಾರೆ. ಹಾಗೆಯೇ ಬಸವಣ್ಣ  ಹಾಲು ಕುಡಿಯುತ್ತಿದ್ದಾನೆ ಎಂದು ಸುದ್ದಿ ಹಬ್ಬಿ ಗ್ರಾಮದ ಎಲ್ಲರೂ ವೇಗವಾಗಿ ಬಂದು ಹಾಲು ತಂದು ಕುಡಿಸಲು ಪ್ರಾರಂಭಿಸಿದ್ದಾರೆ.  ವರದಿ : ಪರ್ವ ನ್ಯೂಸ್ ಕನ್ನಡ

ಸಿದ್ದಾಪುರದಲ್ಲಿ ಹಲಗಿ ಹಬ್ಬದ ಕರಪತ್ರ ಪೂಜೆ !

ಇಮೇಜ್
ಜಮಖಂಡಿ : ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇವತ್ತು ಬೆಳಗ್ಗೆ ಹಲಗಿ ಹಬ್ಬದ ಕರಪತ್ರಗಳನ್ನು ಪೂಜೆ ಮಾಡಲಾಯಿತು. ಇದೇ ತಿಂಗಳು 13 ರಂದು ನಡೆಯುತ್ತಿರುವ ಬೃಹತ್ ಹಲಗಿ ಹಬ್ಬವನ್ನು ಸಿದ್ದಾಪುರದ ಚಾವಡಿ ಆವರಣದಲ್ಲಿ ಹಿಂದೂ ಜಾಗರಣಾ ವೇದಿಕೆ ಹಾಗೂ ಗ್ರಾಮದ ವಿವಿಧ ಸಂಘಟನೆಗಳು ಸೇರಿ ನಡೆಸುತ್ತಿದೆ.  ಪ್ರತಿ ಬಾರಿಗಿಂತ ಈ ಬಾರಿ ಬಹಳಷ್ಟು ಅಚ್ಚುಕಟ್ಟಾಗಿ ನೆರವೇರಲಿದೆ ಎಂದು ಯುವಕರು ಮತ್ತು ಸಂಘಟನೆಕಾರರು ತಿಳಿಸಿದ್ದಾರೆ.  ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಗ್ರಾಮದ ಶ್ರೀ ಈರಯ್ಯ ಹಿರೇಮಠ.ಶ್ರೀ ರಾಜು ಕಲಕಂಬ. ರಾಕೇಶ್ ಕ್ಯಾಶನೂರ್ಮಠ. ದಾನೇಶ್ ಕಲಕಂಬ. ರಾಕೇಶ್ ಪೂಜಾರಿ. ಚೇತನ್ ಶೇಡಬಾಳ್. ಸತೀಶ್ ಹಿರೇಮಠ. ಚೇತನ್ ನಿಂಗಸಾನಿ. ಕಿರಣ್ ಜಿರಗಾಳ್. ಶಂಕರ್.ಅಭಿಶೇಕ್. ಹಾಗೂ ಇನ್ನಿತರು ಇದ್ದರು. ವರದಿ : ಸಂಪಾದಕೀಯ ಪರ್ವನ್ಯೂಸ್ ಜಮಖಂಡಿ.