ಬಾಗಲಕೋಟೆ ಹುಲ್ಯಾಳದ ಪ್ರೇಮಿಗಳ ಪಾಲಿಗೆ ಪೋಷಕರೇ ವಿಲನ್!
ಬಾಗಲಕೋಟೆ: ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳನ್ನು ದೂರ ಮಾಡಲು ಹುಡುಗಿ ಮನೆಯವರೊಂದಿಗೆ ಯುವಕನ ಕುಟುಂಬದವರು ಸೇರಿಕೊಂಡು ಪ್ರೇಮಿಯ ಮೇಲೆ ಹಲ್ಲೆ ಮಾಡಿಸಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ನಡೆದಿದೆ.
ಶಂಬು ಕೋರಿ (22) ಹಾಗೂ ಅದೇ ಗ್ರಾಮದ ಯುವತಿ ಪ್ರೀತಿಸುತ್ತಿದ್ದು, ಒಬ್ಬರನ್ನೊಬ್ಬರು ಬಿಟ್ಟು ಬದುಕಲಾರದ ಸ್ಥಿತಿಯಲ್ಲಿದ್ದಾರೆ. ಆದರೆ ಇವರಿಬ್ಬರ ಪ್ರೀತಿಗೆ ಪೋಷಕರು ಮುಳ್ಳಾಗಿದ್ದಾರೆ. ಇಬ್ಬರದೂ ಜಾತಿ ಬೇರೆ ಎಂಬ ಕಾರಣಕ್ಕೆ ಹುಡುಗನನ್ನು ಹಿಗ್ಗಾಮುಗ್ಗಾ ಥಳಿಸಿ ಇಬ್ಬರನ್ನೂ ದೂರ ಮಾಡಿದ್ದಾರೆ.
ಗಾಯಗೊಂಡಿದ್ದ ಯುವಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ನೀಡಿದರೂ ಸಹ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಯುವಕ ವಿಡಿಯೋ ಮೂಲಕ ಆರೋಪಿಸಿದ್ದಾನೆ.
ವರದಿ : ನ್ಯೂಸ್ ಪರ್ವ ಕನ್ನಡ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ