ಬಿಜೆಪಿ ಗ್ರಾಮೀಣ ಮಂಡಲದ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ದಾನಯ್ಯ ಆಯ್ಕೆ !
ಜಮಖಂಡಿ : ತಾಲೂಕಿನ ಸಿದ್ದಾಪುರ ಗ್ರಾಮದ ಉತ್ಸಾಹಿ ಯುವರಾದಂತ ದಾನಯ್ಯ ಪೂಜಾರಿ ಅವರಿಗೆ ಗ್ರಾಮೀಣ ಮಂಡಲದ ಬಿಜೆಪಿ ಯುವ ಮೋರ್ಚಾ ದ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಜಮಖಂಡಿಯ ರಮಾ ನಿವಾಸದಲ್ಲಿ ನಡೆದ ಬಿಜೆಪಿ ಗ್ರಾಮೀಣ ಮಂಡಲದ ಯುವ ಮೋರ್ಚಾ ಸಭೆಯಲ್ಲಿ ಜಮಖಂಡಿ ತಾಲೂಕಾ ಬಿಜೆಪಿ ಗ್ರಾಮೀಣ ಮಂಡಲದ ಯುವಮೋರ್ಚಾ ಅಧ್ಯಕ್ಷರಾದ ಶ್ರೀ ಸಾಬು ಗಲಗಲಿ. ಗ್ರಾಮೀಣ ಮಂಡಲದ ಅಧ್ಯಕ್ಷರಾದ ಶ್ರೀ ಮಹದೇವ ನ್ಯಾಮಗೌಡ. ಹಾಗೂ ಪಕ್ಷದ ಎಲ್ಲ ಪಧಾಧಿಕಾರಿಗಳ ಸಭೆಯಲ್ಲಿ ಶ್ರೀ ದಾನಯ್ಯ ಅವರಿಗೆ ಗ್ರಾಮೀಣ ಮಂಡಲದ ಬಿಜೆಪಿ ಯುವಮೋರ್ಚಾ ಸ್ಥಾನವನ್ನು ನೀಡಿ ಆದೇಶ ಹೊರಡಿಸಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲಿ ಪಕ್ಷವನ್ನು ಬೆಳೆಸಲು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಈ ಮೂಲಕ ಸಿದ್ದಾಪುರ ಗ್ರಾಮದ ದಾನಯ್ಯ ಅವರ ಸ್ನೇಹಿತರಾದ ವಿನೋದ್. ದಾನೇಶ್. ಅಕ್ಷಯ್. ರಾಕೇಶ್. ಸಂಜು. ಸುನಿಲ್ ಹಾಗೂ ಎಲ್ಲ ಹಿರಿಯರು ಕೂಡ ಹರ್ಷ ವ್ಯಕ್ತಪಡಿಸಿದರು. ವರದಿ. ನ್ಯೂಸ್ ಪರ್ವ. ಕನ್ನಡ